ಲಕ್ಷ್ಮೀಬಾರಮ್ಮ-2 ಪ್ರಸ್ತುತ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಭಾರತೀಯ ಕನ್ನಡ ಭಾಷೆಯ ದೈನಂದಿನ ಧಾರಾವಾಹಿ ಆಗಿದೆ. 13 ಮಾರ್ಚ್ 2023 ರಿಂದ ಆರಂಭವಾದ ಈ ಧಾರಾವಾಹಿಯು ಸೋಮವಾರದಿಂದ ಶನಿವಾರದವರೆಗೆ ರಾತ್ರಿ ೭:೩೦ ಗಂಟೆಗೆ ಪ್ರಸಾರವಾಗುತ್ತಿದೆ. ಹಲವಾರು ಯಶಸ್ವಿ ಧಾರಾವಾಹಿಗಳನ್ನು ನಿರ್ಮಾಣ ಮಾಡಿರುವ ಜೈ ಮಾತಾ ಕಂಬೈನ್ಸ್ ಈ ಧಾರಾವಾಹಿಯನ್ನು ನಿರ್ಮಾಣ ಮಾಡುತ್ತಿದ್ದಾರೆ. == ಕಥೆ == ಲಕ್ಷ್ಮೀಬಾರಮ್ಮ-2 ಕಥೆ ಭಾಗ್ಯಳ ತಂಗಿ ಲಕ್ಷ್ಮೀ ಮತ್ತು ಭಾಗ್ಯಳ ಗಂಡ ತಾಂಡವ್ ಚಿಕ್ಕಮ್ಮನ ಮಗ ವೈಷ್ಣವ್‌ಗೆ ಸಂಬಂಧಿಸಿದೆ. ಈ ಧಾರಾವಾಹಿಯು ಭಾಗ್ಯಲಕ್ಷ್ಮೀ ಧಾರಾವಾಹಿಯ ಮುಂದುವರಿದ ಭಾಗವಾಗಿದೆ (). ಕಥೆಯು ಲಕ್ಷ್ಮೀ-ವೈಷ್ಣವ್ ಮದುವೆಯ ನಂತರದ ಜೀವನದ ಮೇಲೆ ಕೇಂದ್ರಿಕೃತವಾಗಿದೆ. ವೈಷ್ಣವ್ ತಾಯಿಯ ಕುತಂತ್ರ, ವೈಷ್ಣವ್ ಮಾಜಿ ಪ್ರೇಯಸಿ ಕೀರ್ತಿಯ ಹುಚ್ಚಾಟ ಮತ್ತು ವೈಷ್ಣವ್ ಮನೆಯವರಿಗೆ ಲಕ್ಷ್ಮೀ ಬಗ್ಗೆ ಇರುವ ಅಸಮಾಧಾನವೇ, ಇವಲ್ಲದರ ನಡುವೆ ಹೆಚ್ಚುತ್ತಿರುವ ಲಕ್ಷ್ಮೀ ವೈಷ್ಣವ್ ಒಡನಾಟವೇ ಈ ಕಥೆಯ ಹಂದರವಾಗಿದೆ. == ಪಾತ್ರವರ್ಗ == === ಮುಖ್ಯ ಪಾತ್ರಗಳು === ಭೂಮಿಕಾ‌ ರಮೇಶ್: ಲಕ್ಷ್ಮೀ ಆಗಿ; ಭಾಗ್ಯಳ ತಂಗಿ, ವೈಷ್ಣವ್ ಹೆಂಡತಿ. ಶಮಂತ್‌ ಗೌಡ ಆಲಿಯಾಸ ಬ್ರೋ ಗೌಡ: ವೈಷ್ಣವ್ ಆಗಿ; ಕಾವೇರಿಯ ಮಗ, ತಾಂಡವ್ ತಮ್ಮ, ಲಕ್ಷ್ಮಿಯ ಗಂಡ. ತನ್ವಿ ರಾವ್: ಕೀರ್ತಿಯಾಗಿ; ವೈಷ್ಣವ್ ಮಾಜಿ ಪ್ರೇಯಸಿ. ಸುಷ್ಮಾ ನಾಣಯ್ಯ: ಕಾವೇರಿ ಆಗಿ; ವೈಷ್ಣವ್ ತಾಯಿ‌, ಕುಸುಮಾಳ ತಂಗಿ. === ಇತರೆ === ಸುರೇಶ್ ರೈ: ಕೃಷ್ಣಕಾಂತ್ ಆಗಿ; ವೈಷ್ಣವ್ ತಂದೆ,‌ ಕಾವೇರಿಯ ಗಂಡ. ಆಶಾ ಅಯ್ಯನರ್: ಪೂಜಾ ಆಗಿ; ಭಾಗ್ಯಳ ಸ್ವಂತ ತಂಗಿ. ರಜನಿ ಪ್ರವೀಣ್: ಸುಪ್ರೀತಾ ಆಗಿ; ವೈಷ್ಣವ್ ಸೋದರ ಅತ್ತೆ. ಸುನೀತಾ ಶೆಟ್ಟಿ: ಸುನಂದಾ ಆಗಿ; ಭಾಗ್ಯಳ ತಾಯಿ. ಲಾವಣ್ಯ ಹಿರೇಮಠ್ : ವಿಧಿ ಆಗಿ; ವೈಷ್ಣವ್ ತಂಗಿ. ಹರ್ಷಿತಾ: ಗಂಗಾ ಪಾತ್ರದಲ್ಲಿ. ಕಾವೇರಿ ಮನೆಯಲ್ಲಿ ಕೆಲಸ ಮಾಡುವವಳು. === ವಿಸ್ತಾರವಾದ ಪಾತ್ರವರ್ಗ === ಭಾಗ್ಯಲಕ್ಷ್ಮೀ ಧಾರಾವಾಹಿಯಿಂದ ಸುಷ್ಮಾ ಕೆ. ರಾವ್ : ಭಾಗ್ಯ ಆಗಿ; ತಾಂಡವ್ ಹೆಂಡತಿ. ಪದ್ಮಜಾ ರಾವ್‌': ಕುಸುಮ ಆಗಿ; ತಾಂಡವ್ ತಾಯಿ, ಭಾಗ್ಯಳ ಅತ್ತೆ, ಕಾವೇರಿಯ ಅಕ್ಕ. ಸುದರ್ಶನ್‌ ರಂಗಪ್ರಸಾದ್‌: ತಾಂಡವ್ ಆಗಿ; ಕುಸುಮಾಳ ಮಗ, ಭಾಗ್ಯಳ ಗಂಡ. ಗೌತಮಿ ಗೌಡ: ಶ್ರೇಷ್ಠ ಆಗಿ; ಭಾಗ್ಯಳ ಗಂಡ. ತಾಂಡವ್ ಪ್ರೇಯಸಿ. ಕಾವ್ಯ ಗೌಡ ಪಾತ್ರ ಬದಲವಾಣೆಯ ನಂತರ. ಅಮೃತ ಗೌಡ: ತನ್ವಿ ಆಗಿ; ಭಾಗ್ಯ ಮತ್ತು ತಾಂಡವ್ ಮಗಳು. ನಿಹಾರ್‌ ಗೌಡ: ತನ್ಮಯ್ ಆಗಿ; ಭಾಗ್ಯ ಮತ್ತು ತಾಂಡವ್‌ ಮಗ. == ಉಲ್ಲೇಖಗಳು ==